ರಥಾವರನ ಚಿತ್ರೀಕರಣ ಮುಕ್ತಾಯ
Posted date: 27 Tue, Oct 2015 – 08:16:24 AM

ಧರ್ಮಶ್ರೀ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಮಂಜುನಾಥ್.ಎನ್. ನಿರ್ಮಾಣದಲ್ಲಿ ಚಂದ್ರಶೇಖರ್ ಬಂಡಿಯಪ್ಪ  ನಿರ್ದೇಶನದ ೨ನೇ ಚಿತ್ರ ರಥಾವರ ಈ ಹಿಂದೆ ಇವರು ಆನೆಪಟಾಕಿ ಚಿತ್ರ ನಿರ್ದೇಶಿಸಿದ್ದರು. ಈಗ ಈ ಚಿತ್ರ ೧೦೪ ದಿನಗಳ ಕಾಲ ಚಿತ್ರೀಕರಣ ನಡೆಸಿ ಚಿತ್ರೀಕರಣ ಪೂರೈಸಿದೆ.  ಈ ಚಿತ್ರಕ್ಕೆ  ಮಂಗಳೂರು, ಬೆಂಗಳೂರು, ಮೈಸೂರು, ಗದಗ್ ಬಳಿ ಚಿತ್ರೀಕರಣ ನಡೆದಿದೆ.  ಈ ಚಿತ್ರದಲ್ಲಿ ೫ ಹಾಡುಗಳಿದ್ದು  ೪ ಭರ್ಜರಿ ಹೊಡೆದಾಟದ ದೃಶ್ಯಗಳಿಗೆ ಸಾಕಷ್ಟು ಸಮಯ ಮೀಸಲಿಟ್ಟಿದೆ.  ಈ ಚಿತ್ರದಲ್ಲಿ  ಗದಗ್ ಬಳಿ ಇರುವ ಹರ್ತಿ ಸ್ಥಳದಲ್ಲಿ ೧೦೦೦ ಎಮ್ಮೆಗಳ ನಡುವೆ ಒಂದು ಬಫೆಲೋ ಸಾಂಗ್ ನಡೆದಿದ್ದು ನಂತರ ಮಾತುಗಳ ಚಿತ್ರೀಕರಣ ಹಾಗೂ ಶ್ರೀಮುರಳಿ, ರವಿಶಂಕರ್ ನಡುವೆ ಒಂದು  ಭಯಂಕರ ಹೊಡೆದಾಟದ ದೃಶ್ಯ ಚಿತ್ರೀಕರಣವಾಗಿದೆ.  ಅಲ್ಲದೆ ಮಂಡ್ಯ ಜಿಲ್ಲೆಯ ಹುಲಿಕೆರೆ ಬಾವಿ ನೆಲಭಾಗದಲ್ಲಿ  ಮೂರು ಕಿ.ಮೀ ನೀರು ಹರಿಯುತ್ತೆ ನದಿ ನೀರು ಹರಿಯುವಾಗ ಗಾಳಿಯು ಸಹ ಇರುವುದಿಲ್ಲ.  ಇದುವರೆವಿಗೂ ಈ ಜಾಗದಲ್ಲಿ ಯಾವ ಚಿತ್ರದ ಚಿತ್ರೀಕರಣವೂ ನಡೆದಿಲ್ಲ. ರಥಾವರ ಚಿತ್ರಕ್ಕಾಗಿ ಈ ದೃಶ್ಯಗಳಲ್ಲಿ ಶ್ರೀಮುರಳಿ, ಭಜರಂಗಿ ಲೋಕಿ, ಮುಂತಾದವರೊಂದಿಗೆ ಭಾರೀ ಸಾಹಸದ ದೃಶ್ಯಗಳು ಈ ಸ್ಥಳದಲ್ಲಿ ನಡೆದಿದೆ.  ಈ ಚಿತ್ರಕ್ಕೆ ಛಾಯಾಗ್ರಾಹಕ - ಭುವನ್ ಗೌಡ, ಸಂಗೀತ -ಧರ್ಮವಿಶ್, ಕಲೆ-ಹೊಸಮನೆ ಮೂರ್ತಿ, ಸಹಕಾರ ನಿರ್ದೇಶನ-ರವಿ ಶ್ರೀರಾಮ್, ಸಾಹಸ - ಡಿಫರೆಂಟ್ ಡ್ಯಾನಿ, ನೃತ್ಯ-ಎ.ಹರ್ಷ, ಸಾಹಿತ್ಯ-ಯೋಗರಾಜ ಭಟ್, ಕವಿರಾಜ್, ಜಯಂತ್ ಕಾಯ್ಕಿನಿ, ಕೆ.ಕಲ್ಯಾಣ್ - ರಚಿಸಿದ್ದಾರೆ. ದೇವರಾಜ್- ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದ ತಾರಾಗಣದಲ್ಲಿ ಶ್ರೀಮುರುಳಿ, ರಚಿತಾರಾಂ, ಚರಣ್‌ರಾಜ್, ರವಿಶಂಕರ್, ಸಾದುಕೋಕಿಲ, ಚಿಕ್ಕಣ್ಣ, ನರೇಂದ್ರಬಾಬು, ಚಿತ್ರಶಣೈ, ಶರತ್, ಭಜರಂಗಿ ಲೋಕಿ, ಚಂದ್ರು - ಮುಂತಾದವರಿದ್ದಾರೆ. ಚಿತ್ರವನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed